Aralada Mallige Lyrics – Vedha

Aralada Mallige song details :

SongAralada Mallige
SingersIndu Nagaraj
LyricsDr. V Nagendra Prasad
MovieVedha
MusicArjun Janya
LabelZee Music Company

Aralada Mallige song lyrics in Kannada :

ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ
ದಂಡನೆ ಇಲ್ಲವೇ ಚಿವುಟಿದ ಕಯ್ಯಿಗೆ…
ಮುಡಿಯನು ಸೇರದೆ ಮುಡಿಯನು ಸೇರದೆ
ಮಡಿ ಮಡಿ ಮಲ್ಲಿಗೆ ಮಸಣವ ಸೇರಿದೆ
ಕನಿಕರವಿಲ್ಲದ ಕಟುಕರ ದಾಳಿಗೆ
ಕನಸಿನ ತೋಟವೇ ಕಸದ ಪಾಲಿಗೆ…
ಏ ಅರಗಿಳಿ ಮರಿಗಿಳಿ ಕುಳಿತಿರೋ ಮರದಲಿ…
ಗರುಡನಾಗಮನವೇ ಗಿಳಿಗಳ ಮರಣವೇ…
ಕುರುಡರ ಜಗವೇ….

ಅರಳದಾಗಿರು ಮಲ್ಲಿಗೆ…
ಆಯಿತೇ ಮೈ ಮೈಲಿಗೆ…
ಅರಿಯದಾ ಕಿರು ಮಲ್ಲಿಗೆ….
ಅಳುತಿದೆ ತುಸು ಮೆಲ್ಲಗೆ…

ತನಾ ನಾ ನಾ ನಾ…………
ಆ…ಆ…..aaa…..

ಕೆಲವರ ಹಣೆ ಬರಹ ಬರೆದನೆ ಆ ಬ್ರಹ್ಮ
ನೆತ್ತರು ಅಂಟಿದ ಕೈಗಳಲಿ…
ಗಗನದಿ ಅರಗಿರುವ ಆ ನಗುವನು ಅಳಿಸಿರುವ
ದೇವರು ಅನ್ನುವ ಹಸಿದ ಹುಲಿ
ಸುಟ್ಟಿದೆ ಬಾಳ ಬೇರು
ಕಾಯೋರು ಇನ್ನೂ ಯಾರು
ಕಣ್ಣಲಿ ಇರುವ ನೀರು ದುಮುಕ ಬೇಕು ಜೋರು….
ಅಳು ಅಳು ಹೊರಬರಲಿ ಎದೆಯ ಬಿಕ್ಕಳಿಕೆ….

ಅರಳದ ಕಿರು ಮಲ್ಲಿಗೆ
ಆಯಿತೇ ಮೈ ಮೈಲಿಗೆ….
ಅರಿಯದಾಗಿರು ಮಲ್ಲಿಗೆ
ಅಳುತಿದೇ ತುಸು ಮೆಲ್ಲಗೆ…

Leave a Comment

Contact Us