Baanalli badalaago Lyrics – Simpallaag ondu love story – super cine lyrics

Baanalli badalaago – Sonu nigam Lyrics

Singer Sonu nigam

🔹 About the song 🔹

▪ Movie: Simpallaag Ond Love Story
▪ Song: Baanali Badalago
▪ Singer: Sonu Nigam
▪ Starring : Rakshith Shetty, Shwetha
▪ Lyric :Siddu Kodipura
▪ Music : Bharath B J
▪ Banner : Suvin Cinemas
▪ Director-Producer : Sunil Kumar
▪ Label : Jhankar Music

🔹 Lyrics 🔹

ಬಾನಲಿ ಬದಲಾಗೋ ಬಣ್ಣವೇ.. ಭಾವನೆ…
ಹೃದಯವು ಹಗುರಾಗಿ.. ಹಾರುವಾ ಸೂಚನೆ…
ಮನದಾ ಹೂ ಬನದೀ.. ನೆನಪೇ ಹೂವಾಯ್ತು…
ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ…
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ…

ಮನದಿ ಏನೋ.. ಹೊಸ ಗಲಭೆ ಶುರುವಾಗಿದೆ…
ಮರೆತೆ ಏಕೆ.. ಬಳಿ ಬಂದು ಸರಿ ಮಾಡದೆ…
ಗೆಳತೀ, ನನ್ನ ಗೆಳತಿ.. ತೆರೆದೆ ಮನದ ಕಿಟಕಿ…
ಕರುಣಿಸು ಪ್ರೇಮಧಾರೆ.. ಬಯಕೆಯ ತೋರದೆ…

ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ…
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ…

ಸರದಿಯಲ್ಲಿ.. ಹೊಸ ಬಯಕೆ ಸರಿದಾಡಿದೆ…
ಹರಸಿ ಬೇಗ.. ಕರೆ ಮಾಡು ತಡ ಮಾಡದೆ…
ಹುಡುಕೀ, ನನ್ನ ಹುಡುಕಿ.. ನಟಿಸು ಕಣ್ಣ ಮಿಟುಕಿ…
ಗಮನಿಸು ಪ್ರೇಮ ಭಾಷೆ.. ಪದಗಳ ನೋಡದೆ…

ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ…
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ…

ಬಾನಲಿ ಬದಲಾಗೋ ಬಣ್ಣವೇ.. ಭಾವನೆ…
ಹೃದಯವು ಹಗುರಾಗಿ.. ಹಾರುವಾ ಸೂಚನೆ…
ಮನದಾ ಹೂ ಬನದೀ.. ನೆನಪೇ ಹೂವಾಯ್ತು…
ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ…
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ…

🔹▪🔹▪🔹▪🔹

Leave a Comment

Contact Us