Banthu Banthu Bhadrapada lyrics in kannada

Banthu Banthu Bhadrapada song details :

SongBanthu Banthu Bhadrapada
SingersS.P.Balasubramanyam
Lyrics Vijayanarasimha
MusicManoranjan Prabhakar
LabelAnand audio

Banthu Banthu Bhadrapada song lyrics in Kannada :

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ
ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ

ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ
ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ
ಮಂಗಳವ ತರುತಲಿರುವ ಶುಭದ ಚತುರ್ಥಿ

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ

ಮಣ್ಣಿನಿಂದ ಮಾಡಿದ ಮೂರ್ತಿಯ ತಂದು
ಮಂಟಪದಿ ಕೂರಿಸಿ ಭಕುತಿಯಲಿಂದು
ಮಾವಿನೆಲೆಯ ಕಟ್ಟಿ ಮನೆಯ ಸಿಂಗರಿಸಿ
ಮಾವಿನೆಲೆಯ ಕಟ್ಟಿ ಮನೆಯ ಸಿಂಗರಿಸಿ
ರಂಗೋಲಿಯ ಹಾಕಿರಿ ಹಬ್ಬವಾಚರಿಸಿ
ರಂಗೋಲಿಯ ಹಾಕಿರಿ ಹಬ್ಬವಾಚರಿಸಿ

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ

ಮಂತ್ರವ ಹೇಳಿ ಪ್ರಾಣಪ್ರತಿಷ್ಠೆಯ ಮಾಡಿ
ಅರಸಿನ ಕುಂಕುಮವ ಅದಕೆ ಇರಿಸಿ
ಬಗೆಬಗೆಯ ಹೂಗಳಿಂದ ಅರ್ಚನೆಯಗೈದು
ದೂರ್ವೆಯಿಂದ ಪೂಜಿಸಿ ದೈವ ಗಣಪಗೆ

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ

ಧೂಪದೀಪದಿಂದ ಅವನ ಉಪಾಸನೆ
ಮೋದಕ ಕಡುಬು‌ ನೈವೇದ್ಯದಾರಾಧನೆ
ಧೂಪದೀಪದಿಂದ ಅವನ ಉಪಾಸನೆ
ಮೋದಕ ಕಡುಬು‌ ನೈವೇದ್ಯದಾರಾಧನೆ
ಕರ್ಪೂರದಾರತಿಯ ಎತ್ತಿರಿ ಗಣಪತಿಗೆ
ಕರ್ಪೂರದಾರತಿಯ ಎತ್ತಿರಿ ಗಣಪತಿಗೆ
ಕರುಣಾಮಯ ವರನೀಡು ಎನ್ನಿರಿ ನಮಗೆ
ಕರುಣಾಮಯ ವರನೀಡು ಎನ್ನಿರಿ ನಮಗೆ

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ
ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ

ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ
ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ
ಮಂಗಳವ ತರುತಲಿರುವ ಶುಭದ ಚತುರ್ಥಿ

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ

Leave a Comment

Contact Us