Kareyade lyrics ( ಕನ್ನಡ ) – Rupayi

Kareyade song details :

  • Song : Kareyade
  • Singer : Ananya Bhat
  • Lyrics : Utsav Gonwar
  • Movie : Rupayi
  • Music : Anand Rajavikram
  • Label : Anand audio

Kareyade lyrics in kannada

ಕರೆಯದೆ ಸಾಂಗ್ ಲಿರಿಕ್ಸ್

ಕರೆಯದೆ ಹಿಂಬಾಲಿಸಿ ಬರುವೆ
ದಿನ ಮರುಗಿದೆ ನೀ ನನ್ನ ಪರವೇ
ತಿರುಗಿಸುವೆ ಕೂಗದೆ ನನ್ ಹೆಸರೇ
ಎದೆ ಬಡಿತ ಮಿಡಿವುದು
ನಿನ್ ಉಸಿರೇ

ಕಣ್ಣೀರು ಬಯಸಿದ
ವಿರಳ ಧಣಿ ನೀನೆ
ನನ್ನವರ ಮರೆಸುವ
ನನ್ನ ಮಾಂತ್ರಿಕ ತಾನೆ
ಕಣ್ಮುಂದೆ ನೀನಿರದೆ
ಕೊರಗುವೆ ಬಿಡವಿರದೇ
ಮರುಜನ್ಮವೇ ಬೇಡೆನಗೆ
ಜನುಮ ನೀ ಸಿಗದೆ

ಹಂಬಲಿಸಿದೆ ಕಣ್ಮನ ನಿನ್ನ
ಅಪ್ಪುಗೆಯಲ್ಲಿರಲು
ಸೆರೆಯಾಗುವೆ ನಿನ್ನ ತೋಳಲಿ
ತಾಕಲು ಬಿಸಿಯುಸಿರು
ಘನವಾಗಿದೆ ನನ್ನೊಳಗೆ
ನಿನ್ನ ಪ್ರೀತಿಯ ಅಮಲು
supercinelyrics.com

ಏನಾದರು ಹೊರಟಿರುವೆ
ಬಯಸದೆ ನಿನ್ನ ನೆರಳು
ಮನದಲ್ಲಿ ಅಳುಕು
ಉಳಿದಿದೆ ಇನ್ನು
ನಿನ್ನ ಜೊತೆ ಬರದೇ
ಅಳುತಿದೆ ಕಣ್ಣು
ಕಾರ್ಮೋಡ ಸರಿದು
ನಿನ್ನ ಜೊತೆ ಸೇರಲು ತಡೆದು
ಇಟ್ಟಿದೆ ಮುಂದೆ ಹೆಜ್ಜೆ
ನನ್ನ ಕಾಲಿಗೆ ಗರಬಡಿದು
ನಿನ್ನಾತ್ಮ ಬಯಸದ ಈ ಬೀಳ್ಕೊಡುಗೆ ಭರವೇ
ಹಿಂತಿರುಗಿ ನೀ ದೂರ ಹೋದರು
ನಿನ್ನ ಮರೆಯೆ
supercinelyrics.com

ಮಾತಾಡಿದೆ ಮೌನ ನನ್ನೊಳಗೆ
ಉಳಿಯುವುದೇ ನೆನಪು ನಿನ್ನೊಳಗೆ
ತಿರುಗಿಸುವೆ ಕೂಗದೆ ನನ್ ಹೆಸರೇ
ಎದೆ ಬಡಿತ ಮಿಡಿವುದು ನಿನ್ ಉಸಿರೇ

Kareyade song video :

Leave a Comment

Contact Us