Maadappa song details
- Song : Maadappa
- Singer : Raghu Dixit , Naveen sajju
- Lyrics : Daali Dhananjaya
- Music : Raghu Dixit
- Movie : Orchestra mysuru
Maadappa lyrics in Kannada
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಕುಟ್ಟು ಭತ್ತವ ತಟ್ಟು ರೊಟ್ಟಿಯ ಕೇಳು ಎಲ್ಲೆಲ್ಲೂ ಪದವೈತೆ
ಕಟ್ಟು ಗಾಡಿಯ ಸುತ್ತು ರಾಟೆಯ ಎಲ್ಲೆಲ್ಲೂ ಕೇಳು ಪದವೈತೆ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಓರಿಕೊರಳಿನ ಗಂಟೆ ಶಬ್ದವು ಗೋಧೂಳಿ ಸಂಜೆಗೆ ಪದ
ಹಸುಗೂಸಿನ ಗೆಜ್ಜೆ ಸಪ್ಪಳ ಹಡೆದವ್ಗೆ ನಿತ್ಯದಾ ಪದ
ಹೊತ್ಮೂಡ್ತು ಅನ್ನೊ ಕೋಳಿ ಕೂಗು ಹಳ್ಳಿಯ ಕಾಯ ಪದವು
ಅಂಬಾ ಹಸಿವಾತು ಅನ್ನೊ ಕರುವ ಕೂಗಲಿ ಬೆಳಕ ಪದವು
ರುಚಿಯದು ಅನ್ನದ ಪದವೊ
ಅನ್ನವು ಬೆವರಿನ ಪದವೊ
ಬೆವರದು ದುಡಿಮೆಯ ಪದವೊ
ದುಡಿಮೆಯು ಭಕುತಿ ಪದವೊ
ಭೂತಾಯಿ ಜೋಗುಳ ಜಗಕ್ಕೆ ಸರಿಗಮಪ
ಮಗುವಂತ ಮನಸ್ಸೀಗೆ ಎಲ್ಲೆಲ್ಲೂ ಸನಿದಮಮ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಗೋಡೆಯ ಕೆಡವಿ ಸೇತುವೆ ಕಟ್ಟುವ ಪದವೊಂದ
ಮಾದಪ್ಪನೆ ಎಸೆಯೊ ಭೂಮಿಗೆ ಬೆಳಗಲಿ ಸಂಬಂಧ
ನೋವಿರುವ ನಲಿವಿರುವ ಬದುಕೊಂದು ಪದದಸಂತೆ
ದಣಿದಿರುವ ಮನಗಳಿಗೆ ಪದವೊಂದು ಹೆಗಲಿನಂತೆ
ನಿಂತಲೇ ನಿಲದಿರು ಜೀವ
ಹರಿದಾಡು ಪದದಂತೆ ಪದವಾಗ್ಲಿ ಬದುಕು
ಹೂವೊಂದು ಬೇರಿನ ಪದವೊ
ಹಣ್ಣೊಂದು ಮಣ್ಣಿನ ಪದವೊ
ನಗುವದು ಒಲವಿನ ಪದವೊ
ಒಲವದು ಬದುಕಿನ ಪದವೊ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
1 thought on “Maadappa lyrics ( ಕನ್ನಡ ) – Orchestra mysuru”