Telephone gelathi – Rajesh Krishnan Lyrics
Singer | Rajesh Krishnan |
Telephone gelathi welcome welcome song details – Kushalave kshemave
Song Name: TELEPHONE GELATHI
Singer: RAJESH KRISHNAN
Lyrics: K.KALYAN
Film: KUSHALAVE KSHEMAVE
Music: RAJESH RAMANATH
Telephone gelathi welcome welcome song lyrics in Kannada – Kushalave kshemave
ಟೆಲಿಫೋನ್ ಗೆಳತಿ
ಟೆಲಿಫೋನ್ ಗೆಳತಿ welcome welcome
ಈ ಹೃದಯವೆ ನಿನಗೆ kingdom kingdom
ಕಣ್ಣ ಮುಚ್ಚೆ ಗಾಡೆ ಗೂಡೆ
ಯಾಕಮ್ಮಾ
ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ
ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟ ಆದರೂ ಪ್ರತಿ ಉಸಿರಲ್ಲೂ ನಿನ್ನ ಹುಡುಕಾಟ
ಟೆಲಿಫೋನ್ ಗೆಳತಿ welcome welcome
ಈ ಹೃದಯವೆ ನಿನಗೆ kingdom kingdom
ಗಾಳಿ ಇಲ್ಲದೆ ಗಂಧವಿಲ್ಲ
ಬೆಳಕು ಇರದೆ ಬಣ್ಣವಿಲ್ಲ
ನಿನ್ನ ನೆನಪು ಇರದೆ ಎದೆಯಲ್ಲಿ ಉಸಿರಿಲ್ಲ, ಗೆಳತಿ ಉಸಿರಿಲ್ಲ
ಕನಸು ಇರದೆ ಕಣ್ಣುಗಳಿಲ್ಲ
ಚೆಲುವು ಇರದೆ ಹೆಣ್ಣುಗಳಿಲ್ಲ
ನಿನ್ನ ನೆರಳು ಸೋಕದೆ ಬದುಕಲ್ಲಿ ಬಲವಿಲ್ಲ ಗೆಳತಿ ಬಲವಿಲ್ಲ
ತಿಂಗಳ ಬೆಳದಿಂಗಳ ತಂಪಲ್ಲಿಯು ಬೆವರಿಳಿಸೊ
ನೆತ್ತಿಯ ಸುಡು ಸೂರ್ಯನ ಬೇಗೆಯಲ್ಲೂ ತಂಪಿರಿಸೊ
ಒಲವಿನ ಆ ಕೊರಳಿನ ಧ್ವನಿ
ಕೇಳುತಿದೆ
ಆದರೂ ಆ ಹೃದಯದ ಮುಖ ಕಾಣಿಸದೆ
ಕಣ್ಣ ಮುಚ್ಚೆ ಗಾಡೆ ಗೂಡೆ
ಯಾಕಮ್ಮ
ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ
ಟೆಲಿಫೋನ್ ಗೆಳತಿ welcome welcome ಈ ಹೃದಯವೆ ನಿನಗೆ kingdom kingdom
ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರೂನು
ನಿನ್ನ ಕಣ್ಣ ಬೆಳಕಲ್ಲಿಯೆ ನಾ ನಡೆಯುವೆನು, ಗೆಳತಿ ನಡೆಯುವೆನು
ನಿನ್ನ ಕಾಣದೇನೆ ನಾನು ಮಣ್ಣು ಸೇರಿ ಹೋದರೂನು
ಮಣ್ಣ ಒಳಗು ನಿನ್ನ ನೆನಪಲೆ ಉಳಿಯುವೆನು, ಗೆಳತಿ ಉಳಿಯುವೆನು
ದೇವತೆ ನಿನ್ನ ನೋಡಲು ಪ್ರತಿ ಕ್ಷಣವು ಕಾಯುವೆನು
ಅರೆ ಕ್ಷಣ ನೀ ಸಿಕ್ಕರು ನಾ
ನಗುತಲೆ ಸಾಯುವೆನು
ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು
ನಿನ್ನ ಸ್ವರಗಳೆ ನಿನ್ನ ದಾರಿಗೆ ನಗು ಹೂವುಗಳು
ಕಣ್ಣ ಮುಚ್ಚೆ ಗಾಡೆ ಗೂಡೆ
ಯಾಕಮ್ಮಾ
ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ
ಟೆಲಿಫೋನ್ ಗೆಳತಿ welcome welcome ಈ ಹೃದಯವೆ ನಿನಗೆ kingdom kingdom (2)