Yaakinge part 2 lyrics ( ಕನ್ನಡ ) – All ok

Yaakinge part 2 song details

  • Song : Yaakinge part 2
  • Singer : All ok
  • Lyrics : All ok
  • Music : All ok

Yaakinge part 2 lyrics in kannada

ಯಾಕಿಂಗೆ ಸಾಂಗ್ ಲಿರಿಕ್ಸ್

ಓದು ಮುಗ್ಸದು ಜಾಬು ಸೇರದು
ಬಂದ ಕಾಸ ಬ್ಲಾಸ್ಟ್ ಮಾಡಿ ಊರು ಸುತ್ತದು
ಲವ್ ಮಾಡೋದು ಮ್ಯಾಟ್ರಮನಿ ನೋಡೋದು
ಕೊನೆಗ್ ಸಿಕ್ಕಿದನ್ನ ಕಣ್ಣಿಗ್ ಒತ್ಕೊಂಡು ಸೆಟ್ಲು ಆಗೋದು
ಹಿಂಗೆ ಮಾಡೋದು ಹಂಗೆ ಮಾಡೋದು
ಅನ್ನೋ ಟೆಂಕ್ಷನ್ ಅಲ್ಲೆ ದಿನ ಬಾಳ್ತೀವಿ
ಹಿಂದೆ ಆದದೂ ಮುಂದೆ ಆಗೋದೂ
ಯೋಚನೆ ಮಾಡಿ ಇಂದು
ಬಾಳೊದನ್ನ ಮರಿತೀವಿ
ಹಲ್ಲು ಹೋಗಿ ಬೆನ್ನು ಬಾಗಿ ಕೋಲು ಹಿಡಿಯೋ ಮುನ್ನ
ನಿಂಗೆ ಹೆಂಗೆ ಬೇಕು ಹಂಗೆ ಬಾಳಬೇಕು ಇಲ್ಲ ನಿನ್ನ ಡ್ಯೂ ಡೇಟ್ ಆಯ್ತದೆ ಕುಲ್ಗೇಟ್ ಹೋಯ್ತದೆ

ಎಲ್ಲ ಗೊತ್ತು ಆದರೂ ನಾವು ಹಿಂಗೆ ಬಾಳೋದು
ಯಾಕಿಂಗೆ ಶಿವ ಯಾಕಿಂಗೆ
ನೋಡಿದರೂ ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಶಿವ ಯಾಕಿಂಗೆ
ಕೂಡಿದರೂ ಬಾಳಂಗಿಲ್ಲ ಯಾಕಿಂಗೆ
ಇವ್ರ ಮುಂದೆ ಇಲ್ಲ ಅವ್ರ್ ಮುಂದೆ
ಇಲ್ಲಿ ಎಲ್ಲಾ ಸಣ್ಣ ಮಕ್ಕಳೇನೆ ನಿನ್ನ ಮುಂದೆ
ಯಾಕಿಂಗೆ ಶಿವ ಯಾಕಿಂಗೆ
ನೋಡಿದರೂ ನಂಬಂಗಿಲ್ಲ ಯಾಕಿಂಗೆ

ಕಷ್ಟ ಯಾರಿಗಿಲ್ಲ ಹೇಳು ಪರಪಂಚದಲ್ಲಿ
ಕೈಕಾಲು ಇಲ್ದೆ ಎಷ್ಟೋ ಜೀವನ ನಡಿತಿಲ್ವ
ಮೂರ್ ಹೊತ್ತು ಊಟ ಸಿಕ್ಕಿದ್ರೂ ಗೊನಕ್ ಕೊಂಡು ತಿಂತೀವಿ
ಇಲ್ಲಿ ಎಷ್ಟೋ ಜನಕ್ ಒಪ್ಪತಿಗೂನು ಸಿಕ್ತಿಲ್ಲ
ಸುಳ್ಳು ಹೇಳೋರು ಕೊಳ್ಳೆ ಹೊಡಿಯೋರು
ನೂರು ಕಾಲ ಇಲ್ಲೆ ಜಾಂಡ ಉರಿತವ್ರೆ

ಪ್ರೀತಿ ಕೊಟ್ಟೋವ್ರು ದಾನ ವಿತ್ತವರು
ಅರ್ಧ ಆಯಸ್ಸು ಅಲ್ಲೆ ನಮ್ನ ಬಿಟ್ಟು ಹೊಂಟವ್ರೆ
ಇನ್ನೂ ವೋಟು ಮಾಡಿ ನೋಡೋದು ತಲೆ ಚಚ್ಚಿಕೊಳ್ಳೊದಕ್ಕ ಹೆತ್ತ ತಾಯಿಯನ್ನೆ ಈಚೆ ಹಾಕ್ತಾರೆ
ದೇವ್ರು ಯಾವ ಲೆಕ್ಕ
ಅಯ್ಯೋ ನಂಬಿಕೆ ಸಾಯ್ತದೆ
ಮೂಡ್ ಆಫ್ ಆಯ್ತದೆ
ಎಲ್ಲ ಗೊತ್ತು ಆದರೂ ನಾವು ಹಿಂಗೆ ಬಾಳೋದು

ಯಾಕಿಂಗೆ ಶಿವ ಯಾಕಿಂಗೆ
ನೋಡಿದರೂ ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಶಿವ ಯಾಕಿಂಗೆ
ಕೂಡಿದರೂ ಬಾಳಂಗಿಲ್ಲ ಯಾಕಿಂಗೆ
ಇವ್ರ ಮುಂದೆ ಇಲ್ಲ ಅವ್ರ್ ಮುಂದೆ
ಇಲ್ಲಿ ಎಲ್ಲಾ ಸಣ್ಣ ಮಕ್ಕಳೇನೆ ನಿನ್ನ ಮುಂದೆ

ತೇರ ಏರಿ ಅಂಬರದಾಗೆ ತಾನೆ ನೇಸರ ಕುಣಿಯೋದು
ರುಚಿ ರುಚಿಯಾಗಿ ಹಣ್ಣು ಬಿಡುವ ಮರಗಳಿಗೇನೆ ಕಲ್ಲು ಬೀಳೋದು
ಯಾರ್ ಮೇಲೆ ಯಾರ್ ಕೀಳು
ಭೂಮೀನೆ ಗುಂಡಗದೆ
ಜೀವನ ಜಾರೋಬಂಡೆ ತರ ಗೊತ್ತಲ್ವ
ಕಾಸ್ಟ್ಲಿ ದುನಿಯಾ ಇಲ್ಲಿ ಏನು ಇಲ್ಲ ಕಾಂಪ್ಲಿಮೆಂಟರಿ
ವಿಷಕೂಡ ಫ್ರೀ ಆಗ್ ಇಂದು ಸಿಕ್ಕಲ್ಲ
ಬೆಕ್ಕಿಗ್ ಗಂಟೆ ಕಟ್ಟೋರು ಯಾರು
ದಿನ ಸಾಯೋರ್ಗೆ ಅಳೋರ್ಯಾರು
ಬೀದಿಗೊಬ್ಬ ಈರ್ಲೇಬೇಕು ಟೋಪಿವಾಲ
ತೂಕಕ್ಕಾಗಿ ವಿಕಿಪೀಡ್ಯಾ ತೆವ್ಲಿಗಾಗಿ ಸೋಶಿಯಲ್ ಮೀಡಿಯಾ
ನಿವ್ಸ್ ನೋಡಿ ಆದ್ವಿ ಗಾಬ್ರಿ ಗೋಪಾಲ
ಇಲ್ಲಿ ಪಬ್ ಅಲ್ಲಿ ಹಿಂದಿ ತಮಿಳು ತೆಲುಗು ಎಲ್ಲ ಹಾಕ್ತಾರೆ
ಕನ್ನಡಾನ ಹಾಕಿ ಅಂದ್ರೆ ನಮ್ನೇ ಈಚೆಗ್ ಹಾಕ್ತಾರೆ

ಕೆಟ್ಟಕೋಪ ಬಂದರೂ ಬ್ಯಾಕ್ ಅಲ್ ಉರಿದರೂ
Whose father what goes ಅಂತ ಇರೋದು

ಯಾಕಿಂಗೆ ದೇವ್ರೆ ಯಾಕಿಂಗೆ
ನೋಡಿದರೂ ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ದೇವ್ರೆ ಯಾಕಿಂಗೆ
ಕೂಡಿದರೂ ಬಾಳಂಗಿಲ್ಲ ಯಾಕಿಂಗೆ
ಇವ್ರ ಮುಂದೆ ಇಲ್ಲ ಅವ್ರ್ ಮುಂದೆ
ಇಲ್ಲಿ ಎಲ್ಲಾ ಸಣ್ಣ ಮಕ್ಕಳೇನೆ ನಿನ್ನ ಮುಂದೆ

ಯಾಕಿಂಗೆ ಶಿವ ಯಾಕಿಂಗೆ
ನೋಡಿದರೂ ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಯಾಕಿಂಗೆ
ಯಾಕಿಂಗೆ ಯಾಕಿಂಗೆ

Yaakinge part 2 song video :

Leave a Comment

Contact Us